ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ? 
ನಾನು ಕೂಗಿದಾಗಲೆಲ್ಲ ಬರುವಳೆನ್ನ ಶಾರದೆ | 
ಹಿಂದೆಮುಂದೆ ನೋಡದೆ ಎದುರು ಮಾತನಾಡದೆ || 
ಕೋಣೆಯೊಳಗೆ ಬಳೆಯ ಸದ್ದು ನಗುವರತ್ತೆ ಬಿದ್ದು ಬಿದ್ದು | 
ಸುಮ್ಮನಿರಲು ಮಾವನವರು, ಒಳಗೆ ಅಕ್ಕ ಭಾವನವರು | 
ಎಂದು ತುಂಟ ಹುಡುಗನು ಗುಟ್ಟ ಬಯಲಿಗೆಳೆವನು || 
ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು |
ಕಾಣದೊಂದು ಕನಸ ಕಂಡು ಮಾತಿಗೊಲಿಯದಮೃತವುಂಡು | 
ದುಃಖ ಹಗುರವೆನುತಿರೆ ಪ್ರೇಮವೆನಲು ಹಾಸ್ಯವೇ? || 
ಯಾರು ಕದ್ದು ನೋಡಿದರೇನು
ಊರೆ ಎದ್ದು ಕುಣಿದರೇನು? 
ಜನರ ಬಾಯಿಗಿಲ್ಲ ಬೀಗ ಹೃದಯದೊಳಗೆ ಪ್ರೇಮ ರಾಗ | 
ಎಂಥ ಕೂಗನಳಿಸಿದೆ ಬೆಳಗಿ ಬದುಕ ಹರಿಸಿದೆ || 
ಇಂದೆ ಅದಕೆ ಕರೆವುದು ನನ್ನ ಹುಡುಗಿ ಎನುವುದು | 
ಹೂವ ಮುಡಿಸಿ ನಗುವುದು ಅಪ್ಪಿ ಮುತ್ತನಿಡುವುದು | 
ಬಾರೆ ನನ್ನ ಶಾರದೆ ಬಾರೆ ಅತ್ತ ನೋಡದೆ || 